ನೋಹ್‍ಕಲಿಕಾಯ್ ಜಲಪಾತವು ಭಾರತದಲ್ಲಿನ ಅತಿ ಎತ್ತರದ ಧುಮುಕು ಜಲಪಾತವಾಗಿದೆ. ಇದರ ಎತ್ತರ 1115 ಅಡಿಯಷ್ಟಾಗಿದೆ. ಈ ಜಲಪಾತವು ಭೂಮಿಯ ಮೇಲಿನ ಅತ್ಯಂತ ಒದ್ದೆ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿ ಹತ್ತಿರ ಸ್ಥಿತವಾಗಿದೆ. ಒಂದು ತುಲನಾತ್ಮಕವಾಗಿ ಸಣ್ಣ ಪ್ರಸ್ಥಭೂಮಿಯ ಶಿಖರದ ಮೇಲೆ ಸಂಗ್ರಹಗೊಳ್ಳುವ ಮಳೆನೀರು ನೋಹ್‍ಕಲಿಕಾಯ್ ಜಲಪಾತಕ್ಕೆ ನೀರುಣಿಸುತ್ತದೆ. ಈ ನೀರು ಡಿಸೆಂಬರ್ - ಫ಼ೆಬ್ರುವರಿ ನಡುವಿನ ಶುಷ್ಕ ಋತುವಿನಲ್ಲಿ ಕಡಿಮೆಯಾಗುತ್ತದೆ. ಜಲಪಾತದ ಕೆಳಗೆ ಅಸಾಮಾನ್ಯ ಹಸಿರು ಬಣ್ಣದ ನೀರಿರುವ ಧುಮುಕು ಕೊಳವು ರೂಪಗೊಂಡಿದೆ. == ಉಲ್ಲೇಖಗಳು ==